ಶರ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಶರವೇ ಷಟ್ಪದಿಯಲ್ಲಿ ಅತ್ಯಂತ ಚಿಕ್ಕದು. ನಾಗವರ್ಮ ಹೇಳಿರುವ ಇದರ ಲಕ್ಷಣಗಳು. ಶರ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,೨,೪,೫ನೆಯ ಸಾಲುಗಳು ಸಮನಾಗಿದ್ದು, ೪ ಮಾತ್ರೆಯ ಎರಡು ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೪ ಮಾತ್ರೆಯ ೩ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು). ಇದರಲ್ಲಿ ಮಧ್ಯೆ ಗುರುವಿನ ಅಂದರೆ ( - )ಜಗಣ, ಶರ ಷಟ್ಪದಿಯ ಯಾವ ಗಣದಲ್ಲಿಯೂ ಬರಕೂಡದು. ಉದಾಹರಣೆ: ಈಶನ ಕರುಣೆಯ ನಾಶಿಸು ವಿನಯದಿ ದಾಸನ ಹಾಗೆಯೆ ನೀ ಮನವೇ ಕ್ಲೇಶದ ವಿಧ ವಿಧ ಪಾಶದ ಹರಿದು ವಿ ಲಾಸದಿ ಸತ್ಯವ ತಿಳಿ ಮನವೇ ಇದರ ಛಂದಸ್ಸಿನ ಈಶನ |ಕರುಣೆಯ ನಾಶಿಸು | ವಿನಯದಿ ದಾಸನ | ಹಾಗೆಯೆ | ನೀ ಮನ | ವೇ ಕ್ಲೇಶದ | ವಿಧ ವಿಧ ಪಾಶದ | ಹರಿದು ವಿ ಲಾಸದಿ | ಸತ್ಯವ | ತಿಳಿ ಮನ | ವೇ ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ: ೪|೪ ೪|೪ ೪|೪|೪| ೪|೪ ೪|೪ ೪|೪|೪| == ನೋಡಿ == ಶರ ಕುಸುಮ ಭೋಗ ಭಾಮಿನೀ ವಾರ್ಧಕ ಪರಿವರ್ಧಿನೀ ಕನ್ನಡ ವ್ಯಾಕರಣ == ಉಲ್ಲೇಖ ==